ಹಪ್ಪಳಪ್ಪಳಪ್ಪಳೋ... ...
ನಾನು ಚಿಕ್ಕವನಿದ್ದಾಗ ಅಪ್ಪಯ್ಯ ನನ್ನನ್ನುದ್ದೇಶಿಸಿ ತಾವೇ ರಚಿಸಿದ ಶಿಶುಗೀತೆಯನ್ನ ಯಾವತ್ತೂ ಹೇಳುತ್ತಿದ್ದರು (ತಿಂಡಿಪೋತನಾಗಿದ್ದ ನಾನು ಹಪ್ಪಳದ ಹಿಟ್ಟು, ಹಸಿ ಹಪ್ಪಳ ಕದ್ದು ತಿನ್ನುತ್ತಿದ್ದುದರಿಂದ ಇರಬೇಕು). ಕುಂದಾಪುರ ಕನ್ನಡದ ಸೊಗಡನ್ನು ಹೊಂದಿರುವ, ಅಲ್ಲಿನ ವಿಶೇಷವಾದ ಹಲಸಿನ ಕಾಯಿ ಹಪ್ಪಳಕ್ಕೆ ಸಂಬಂಧಿಸಿದ ಈ ಪದ್ಯ ಈಗಲೂ ನೆನಪಾಗಿ ಮುದ ನೀಡುತ್ತಿರುತ್ತದೆ. ಹಪ್ಪಳದ ರುಚಿ ಹೊತ್ತಿರುವ ಪದ್ಯದ ರುಚಿಯನ್ನ ನೀವೂ ಆಸ್ವಾದಿಸಿ!
ಹಪ್ಪಳಪ್ಪಳಪ್ಪಳೋ
ಹಲ್ಸಿನ್ ಕಾಯ್ ಹಪ್ಪಳೋ
ತಿಂದದ್ಯಾಕೆ ಹಪ್ಪಳೋ
ಪೆಟ್ ಕೊಡ್ತೀನ್ ತಾಳೋ...!
ಪ್ರಾಸಬದ್ಧವಾಗಿರುವ ಈ ಪದ್ಯ ವಿಶೇಷವಾದ ಅರ್ಥವನ್ನು ಹೊಂದಿರದಿದ್ದರೂ ಚಿಕ್ಕ ಮಕ್ಕಳ ತೊದಲ್ನುಡಿಯಲ್ಲಿ ಹೊರಬಂದಾಗ ಪದ್ಯದ ಎಫೆಕ್ಟೇ ಬೇರೆ! ಅಪ್ಪಯ್ಯ ಮಕ್ಕಳ ತೊದಲ್ನುಡಿಯ ಅನುಕರಣೆಯಲ್ಲಿ ಹೇಳಿಕೊಡುತ್ತಿದ್ದ ’ಹಪ್ಪಳಪ್ಪಳಪ್ಪಳೋ...’ ಈಗಲೂ ಕಿವಿಯಲ್ಲಿ ಗುನುಗುನಿಸುತ್ತಿರುತ್ತದೆ! ಫೆಬ್ರವರಿ - ಮಾರ್ಚ್ ತಿಂಗಳ ಅಂತ್ಯಕ್ಕೆ ನೆಂಪಿನಲ್ಲಿ ಆರಂಭವಾಗುತ್ತಿದ್ದ ಸೂರ್ಯ ಬಕ್ಕೆ, ಚಂದ್ರ ಬಕ್ಕೆ ಹಲಸಿನಕಾಯಿ ಹಪ್ಪಳ ತಯಾರಿಕೆಯ ಸಂಭ್ರಮದ ನೆನಪು ಕಾಡಲಾರಂಭಿಸುತ್ತದೆ!
3 comments:
Hua...
Tumba dina ayt maraya net kanade.. adke blogu kanalla comment baruk aayilla.... ivatt kande ella... articles ella super itt... mattond sari hampege hodang aayt... happalavoo olle idditt.... postings heenge mundvarili....
Giri
ಹ್ವಾ ಗಿರಿ... ಬರಿಯುಕೆ ಎಷ್ಟು ಬೇಕಾದ್ರೂ ಬರಿಲಕ್ಕು... ಬರ್ದದನ್ನ ಓದಿ ಹೀಂಗೆ ಒಳ್ಳೆ ಕಮೆಂಟ್ ಕಳ್ಸಿದ್ರೆ ಇನ್ನೂ ತುಂಬಾ ಬರಿಯುಕೆ ಉಮೇದ್ ಬತ್... :-)
ಕಮೆಂಟಿಸಿದ್ದಕ್ಕೆ ಧನ್ಯವಾದಗಳು...
padya odi tumba kushiaythu nodi. naanu halasina happalada vidhana huduktha idde nodi aadre padya odi vidhana sikkaste kushi aythu.
Post a Comment