ಹಲವಾರು ವೈಶಿಷ್ಠ್ಯಗಳಿಂದ ಕೂಡಿರುವ ಬದಾಮಿ ಇಲ್ಲಿರುವ ಪುಂಡು ಮಂಗಗಳಿಂದಲೂ (ಕು)ಖ್ಯಾತವಾಗಿದೆ. ಪ್ರವಾಸಿಗರು ಕೊಂಚ ಎಚ್ಚರ ತಪ್ಪಿದರೂ ನಿರ್ಭೀತ ಮಂಗಗಳು ಅವರ ಹ್ಯಾಂಡ್ ಬ್ಯಾಗ್, ನೀರಿನ ಬಾಟಲ್, ತಿಂಡಿ ತಿನಿಸುಗಳನ್ನು ಲಪಟಾಯಿಸಿಬಿಡುತ್ತವೆ.
ಬದಾಮಿಯ ಮಂಗಗಳ ಕಪಿಚೇಷ್ಟೆಯ ತುಣುಕುಗಳು ಇಲ್ಲಿವೆ...
ಬದಾಮಿಯ ಮಂಗಗಳ ಕಪಿಚೇಷ್ಟೆಯ ತುಣುಕುಗಳು ಇಲ್ಲಿವೆ...
ನಾವು ಕೆಳಗಿಳಿದು ಬರುತ್ತಿರುವಾಗ ಒಂದು ಮಂಗ ಯಾರದೋ ಚಪ್ಪಲಿ ಹಿಡಿದುಕೊಂಡು ಓಡುತ್ತಿತ್ತು, ಚಪ್ಪಲಿಯ ಒಡತಿ ಮಂಗನ ಹಿಂದೆ ಓಡುತ್ತಿರುವುದೂ ಕಂಡು ಬಂತು. ಮತ್ತಷ್ಟು ಮುಂದೆ ಬಂದಾಗ ಹೂತೋಟದ ನಡುವೆ ಯುವತಿಯೊಬ್ಬಳು ಏನನ್ನೋ ಹುಡುಕುತ್ತಿದ್ದಳು. ಸೂಕ್ಷ್ಮವಾಗಿ ಗಮನಿಸಿದಾಗ ಮೊಬೈಲ್ ನ ಬ್ಯಾಟರಿ, ನಂತರ ಮೊಬೈಲ್ ನ ಕವಚ ಹೀಗೆ ಚದುರಿಹೋಗಿದ್ದ ಮೊಬೈಲ್ ನ ಭಾಗಗಳನ್ನು ಒಟ್ಟುಹಾಕುತ್ತಿದ್ದಳು. ಯಾವುದೋ ಹೈಟೆಕ್ ಮಂಗ ಅವಳ ಹ್ಯಾಂಡ್ ಬ್ಯಾಗ್ ಎಗರಿಸಿ ಅದರೊಳಗಿದ್ದ ಮೊಬೈಲ್ ನ ಮೇಲೆ ತನ್ನ ಜಾಣ್ಮೆಯನ್ನು ಪ್ರಯೋಗಿಸಿ ಎಲ್ಲೆಂದರಲ್ಲಿ ಎಸೆದಿತ್ತು. ಬ್ಯಾಗ್ ಹೊತ್ತೊಯ್ದು ಗುಡ್ಡದ ಮೇಲೆ ಕುಳಿತುಕೊಂಡಿತ್ತು. ಹೀಗೆ ಮಂಗಗಳ ಕಪಿಚೇಷ್ಟೆ ವಿವರಿಸಿದಷ್ಟೂ ಇದೆ.
ನೀವು ಬದಾಮಿಯ ಕಡೆ ಹೊರಟಿದ್ದೀರಾ? ಮಂಗಗಳ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿರಿ...
ಚಿತ್ರಗಳು: ನೆಂಪು ಗುರುನೀವು ಬದಾಮಿಯ ಕಡೆ ಹೊರಟಿದ್ದೀರಾ? ಮಂಗಗಳ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿರಿ...
-o-
3 comments:
ಚೆನ್ನಾಗಿದೆ!
ಸಂಪದದಲ್ಲೊಬ್ಬರು ನೆಂಪು ಬ್ಲಾಗಿಗೆ ಒಳ್ಳೆ ಬ್ಲಾಗ್ ಎಂದು ರೇಟಿಂಗ್ ಕೊಟ್ಟಿದ್ದಾರೆ!
ನೋಡಿ http://sampada.net/blog/shreekantmishrikoti/08/03/2010/24326
@ ಸನ್ನಿವಾಸ... ಧನ್ಯವಾದಗಳು
Post a Comment